Admission

..KERALA'S ONLY ONE GOVT KANNADA PRE PRIMARY SCHOOL , GWLP SCHOOL MANJESHWAR............". .......

Monday, 22 December 2014

school



Moosa  Mohammad Arfaz;I Place With A` grade inArabic Hand writing,Amina; II Place with A` grade  In Kannada Story Telling, Habeebul Rahman; A` grade in Arabic Story Telling  Under Manjeshwara Sub Dist Kalothsava -2014. 


ಕ್ರಿಸ್ಮಸ್  ಹಬ್ಬ  ಆಚರಣೆ



 ನಮ್ಮ ಶಾಲೆಯ ಕ್ರಿಸ್ಮಸ್ ಹಬ್ಬ ಕ್ಕೆ  ಭೇಟಿ ನೀಡಿದ  ಸಾಂತಾ ಕ್ರಾಸ್ 



ಶಾಲಾ ಬ್ಲಾಗ್ ನ್ನು P.T.A ಅಧ್ಯಕ್ಷರಾದ ಶ್ರೀಮತಿ ರಾಜೀವಿ ಉದ್ಘಾಟಿಸಿದರು 


2014-15 ರ ಸರಕಾರದಿಂದ ಲಭಿಸಿದ  ಉಚಿತ ಸಮವಸ್ತ್ರವನ್ನು ವಿತರಿಸುವುದು 


ಮಕ್ಕಳ ದಿನಾಚರಣೆಯಂದು ರಕ್ಷಕರ ಸಮ್ಮೇಳನವನ್ನು ಶಾಲಾ ಅಧ್ಯಾಪಕ ಜಬ್ಬಾರ್.ಬಿ  ನಿರ್ವಹಿಸುತ್ತಿರುವುದು 



Thursday, 30 October 2014

ಅಭಿನಂದನೆಗಳು

ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳದಲ್ಲಿ ವಿಜೇತ ವಿದ್ಯಾರ್ಥಿಗಳು, L.P ವಿಭಾಗದ ಜಿಯೊಮೆಟ್ರೀಕ್ ಚಾರ್ಟ್ ನಲ್ಲಿ ಹಬೀಹ್ ರಹಮಾನ್ ತೃತೀಯ ಸ್ಥಾನ, ಪೇಪರ್ ಕ್ರಾಫ್ಟ್ ನಲ್ಲಿ ಮೊಹಮ್ಮದ್ ರಿಯಾಜ್ ಪ್ರಥಮ ಸ್ಥಾನ, U.P ವಿಭಾಗದ ಪೇಪರ್ ಕ್ರಾಫ್ಟ್ ನಲ್ಲಿ ತನುಷ ದ್ವೀತಿಯ ಸ್ಥಾನ ಪಡೆದಿದ್ದಾರೆ.

Wednesday, 24 September 2014




ಶಿಕ್ಷಕ ದಿನಾಚರಣೆ ಅಂಗವಾಗಿ  ಸನ್ಮಾನೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಶಾಲಾ ಮಕ್ಕಳು ,ಅಧ್ಯಾಪಕರು ವೀಕ್ಷಿಸಿದರು.

Monday, 25 August 2014

ಧ್ವಜಾರೋಹಣ


ಶಾಲಾ ಎಸೆಂಬ್ಲಿ


ಸಭಾ ಕಾರ್ಯಕ್ರಮ


ಸಾಂಸ್ಕೃತಿಕ ಕಾರ್ಯಕ್ರಮಗಳು

68ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಪಿ.ಟಿ.ಎ.ಅಧ್ಯಕ್ಷೆ ಶ್ರೀಮತಿ ರಾಜೀವಿ ನೆರವೇರಿಸಿದರು.ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಹಿರಿಯ ಅಧ್ಯಾಪಕ ಶ್ರೀ ಜಯಂತ ವಹಿಸಿದರು.ಪಿ.ಟಿ.ಎ.ಅಧ್ಯಕ್ಷೆ ಶ್ರೀಮತಿ ರಾಜೀವಿ ಉದ್ಘಾಟಿಸಿದರು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಅಧ್ಯಾಪಕೆ ಸೊನಿಯಾ ಸ್ವಾಗತಿಸಿ,ಅಧ್ಯಾಪಕೆ ಸುಮಯ್ಯ ಧನ್ಯವಾದಗೈದರು.ಅಧ್ಯಾಪಕ ಜಬ್ಬಾರ್.ಬಿ ನಿರೂಪಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಕರು ಭಾಗವಹಿಸಿದರು.

Sunday, 10 August 2014

ಸಾಕ್ಷರ

ದಿನಾಂಕ 6/8/14 ರಂದು 'സാക്ഷര2014' ಉದ್ಘಾಟನೆಯಾಯಿತು.ಪಿ.ಟಿ.ಎ ಅಧ್ಯಕ್ಷರಾದ ರಾಜೀವಿ ಉದ್ಘಾಟಿಸಿದರು.ಹಿರಿಯ ಅಧ್ಯಾಪಕ ಜಯಂತ ಸರ್ ಅಧ್ಯಕ್ಷತೆ ವಹಿಸಿದರು.ಅಧ್ಯಾಪಕಿ ಸೊನಿಯಾ ಸ್ವಾಗತಿಸಿ,ಅಧ್ಯಾಪಕಿ ಸುಮಯ್ಯ ವಂದಿಸಿದರು. .ಅಧ್ಯಾಪಕ ಜಬ್ಬಾರ್.ಬಿ ಕಾರ್ಯಕ್ರಮವನ್ನು ನಿರೂಪಿಸಿ ಸಾಕ್ಷರದ ಮಹತ್ವವನ್ನು ವಿವರಿಸಿದರು.ಕೆಲವು ರಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಸಾಕ್ಷರ 2014

Saturday, 9 August 2014


ಶಾಲಾ ಮಂತ್ರಿಮಂಡಲದ ಚುನಾವಣೆಯು ದಿನಾಂಕ 8/8/2014 ರಂದು ಶುಕ್ರವಾರ ಜರಗಿತು.ಮಕ್ಕಳು ತಮ್ಮ ಗುರುತುಚೀಟಿಯೊಂದಿಗೆ ಮತ ಚಲಾಯಿಸಲು ಸಾಲಾಗಿ ನಿಂತು ಮತ ಚಲಾಯಿಸಿದರು. ವಿವಿಧ ಚುನಾವಣಾಧಿಕಾರಿಗಳಾಗಿ ಶಾಲಾ ಮಕ್ಕಳು ಕಾರ್ಯಾಚರಿಸಿದರು.ಈ ಕಾರ್ಯಕ್ರಮವು 'ಸಮಾಜ ವಿಜ್ಞಾನ ಕ್ಲಬ್' ನ ನೇತ್ರತ್ವದಲ್ಲಿ ಸಂಪನ್ನಗೊಂಡಿತು.

ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನಾಚರಣೆಯ ಧ್ಯೇಯ ಉದ್ದೇಶಗಳನ್ನು  ಅಧ್ಯಾಪಕರಾದ ಶ್ರೀ ಜಬ್ಬಾರ್ .ಬಿ  ವಿವರಿಸುತ್ತಿರುವುದು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ,Incharge Headmaster ಶ್ರೀ ಜಯಂತ .ಎಂ ಗಿಡ ವಿತರಿಸುವ ಮೂಲಕ  ಉದ್ಘಾಟಿಸುತ್ತಿರುವುದು.

Wednesday, 30 July 2014

School Activities

Procession of PRAVESHOTHSAV 2014-15
LUNAR DAY Celebration

Display of charts in connection with LunarDay

Pupils are collecting information to attempt quiz on LunarDay

Kids are busy with indepth reading of picture charts on LunarDay

Mr.Jayantha.M(In-charge HM) Distributing Rice(5KG) On behalf of Ramzan.
               Sponsered by a Doner
One of the parent receiving the kit